ಬ್ಯಾಂಕಿನ ಠೇವಣಿ ಬಡ್ಡಿ ದರಗಳನ್ನು ಪರಿಷ್ಕರಿಸಿ ನಿಗದಿಗೊಳಿಸಿರುವ ಬಗ್ಗೆ

ಉಲ್ಲೇಖ:- ದಿನಾಂಕ 02-12-2016ರ ಆಡಳಿತ ಮಂಡಳಿ ಸಭೆಯ ತೀರ್ಮಾನದ ರೀತ್ಯಾ.

ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಬೆಂಗಳೂರು, ಇತರೆ ವಿವಿದ ಬ್ಯಾಂಕುಗಳು, ಹಾಗೂ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟವು ನಿಗದಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು. ಅದರಂತೆ, ನಮ್ಮ ಬ್ಯಾಂಕ್ ಸ್ವಿಕರಿಸುವ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿ ಈ ಕೆಳಗಿನಂತೆ ನಿಗದಿಪಡಿಸಲಾಗಿದ್ದು ದಿನಾಂಕ:05-12-2016 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.

ಕ್ರ . ಸಂ ವಿವರಗಳು ಬ್ಯಾಂಕು ಹಾಲಿ ನೀಡುತ್ತಿರುವ ಬಡ್ಡಿದರ ಶೇ.
1 7 ದಿನಗಳಿಂದ 14 ದಿನಗಳಿಗೆ 3.50
2 15 ದಿನಗಳಿಂದ 30 ದಿನಗಳಿಗೆ 4.00
3 31 ದಿನಗಳಿಂದ 45 ದಿನಗಳಿಗೆ 4.50
4 46 ದಿನಗಳಿಂದ 90 ದಿನಗಳಿಗೆ 5.25
5 91 ದಿನಗಳಿಂದ 180 ದಿನಗಳಿಗೆ 5.50
6 181 ವರ್ಷದಿಂದ 364 ವರ್ಷಗಳ ವರೆಗೆ 6.50
7 1 ವರ್ಷದಿಂದ 3 ವರ್ಷಗಳ ವರೆಗೆ 7.50
8 3 ವರ್ಷ ಮೇಲ್ಪಟ್ಟು 7.75
9 ಉಳಿತಾಯ ಖಾತೆಗೆ 3.00
  1. ನಮ್ಮ ಬ್ಯಾಂಕಿನ ನೌಕರರು ಹಾಗೂ ಬ್ಯಾಂಕಿನ ನಿವೃತ್ತ ನೌಕರರು ತಮ್ಮ ಹೆಸರಿನಲ್ಲಿ ನಿಗಧಿತ ಠೇವಣಿ ಮಾಡಿದಲ್ಲಿ ಶೇ.1ರಷ್ಟು ಉತ್ತೇಜನ ಬಡ್ಡಿ ನೀಡಬಹುದಾಗಿದೆ. (ಸದರಿ ನೌಕರರಿಂದ ಅರ್ಜಿಯೊಂದಿಗೆ ನಬಾರ್ಡ ಹಾಗೂ ಆರ್.ಬಿ.ಐ. ಸೂಚನೆಯಂತೆ ಡಿಕ್ಲರೇಷನ್ ಪಡೆಯುವುದು).
  2. ಹಿರಿಯ ನಾಗರೀಕರು(60 ವರ್ಷಗಳ ಮೇಲ್ಪಟ್ಟು) ತಮ್ಮ ಹೆಸರಿನಲ್ಲಿ ನಿಗಧಿತ ಠೇವಣಿಯನ್ನು ಬ್ಯಾಂಕಿನಲ್ಲಿ ತೊಡಗಿಸಿದಲ್ಲಿ ಅಂತವರಿಗೆ ಶೇ.0.50ರಷ್ಟು ಉತ್ತೇಜನ ಬಡ್ಡಿ ದರವನ್ನು ನೀಡಬಹುದಾಗಿದೆ.
  3. ಠೇವಣಿ ಹೊಂದಿದ ಗ್ರಾಹಕರು ಠೇವಣಿ ಮರು ನವೀಕರಣ ಮಾಡಬೇಕಾದಲ್ಲಿ ಠೇವಣಿ ಮಾಡುವ ದಿನದಂದೇ ಆಟೋ ರಿನಿವಲ್ ಬಗ್ಗೆ ಗ್ರಾಹಕರಿಂದ ಒಪ್ಪಿಗೆ ಪಡೆಯತಕ್ಕದ್ದು, ಮತ್ತು ಇಂತಹ ಠೇವಣಿಗಳನ್ನು ಠೇವಣಿ ಮಾಡುವ ದಿನದಂದು ಮಾಡಿದ ಅವಧಿಗೆ ಆಟೋ ರಿನಿವಲ್ ಆಗುವಂತೆ ಕ್ರಮವಿಡುವುದು. ಠೇವಣಿಯನ್ನು ಆಟೋ ರಿನಿವಲ್ ಮಾಡಿದ ನಂತರ 30 ದಿನದೊಳಗಾಗಿ ಮರು ಪಾವತಿ ಮಾಡಬೇಕಾದಲ್ಲಿ ಉಳಿತಾಯ ಖಾತೆಗೆ ನೀಡುವ ಬಡ್ಡಿಯನ್ನು ಪಾವತಿಸುವುದು.
  4. ಠೇವಣಿಗಳನ್ನು ಅವಧಿಗೆ ಮುಂಚಿತವಾಗಿ ಮುಕ್ತಾಯಗೊಳಿಸಿ ಹಣ ಹಿಂಪಡೆದಲ್ಲಿ ಅಂತಹ ಅವಧಿಗೆ ನೀಡಲಾಗುವ ಬಡ್ಡಿ ದರಕ್ಕಿಂತ ಶೇಕಡ 1.00 ಬಡ್ಡಿ ಕಡಿಮೆಗೊಳಿಸಿ ಪಾವತಿಸತಕ್ಕದ್ದು.
  5. ಎಲ್ಲಾ ಅವಧಿಯ ಠೇವಣಿಗಳ ಮೇಲೆ ಠೇವಣಿ ಮೊತ್ತದ ಶೇಕಡ 80ರಷ್ಟು ಮೊತ್ತವನ್ನು ಠೇವಣಿ ಸಾಲ ನೀಡುವುದು. ಮತ್ತು ಇಂತಹ ಸಾಲಗಳಿಗೆ ಠೇವಣಿ ಮೇಲೆ ನೀಡುವ ಬಡ್ಡಿದರಕ್ಕೆ ಶೇಕಡ 2.00ರಷ್ಟು ಹೆಚ್ಚಿಗೆ ಅನ್ವಯವಾಗುತ್ತದೆ.
  6. ರೂ.10000/-ಕ್ಕೆ ಮೇಲ್ಪಟ್ಟು ಬಡ್ಡಿ ಪಾವತಿಸುವ ಎಲ್ಲಾ ಠೇವಣಿದಾರರಿಂದ ಟಿ.ಡಿ.ಎಸ್. ಕಡಿತ ಮಾಡದೇ ಇರುವ ಬಗ್ಗೆ ಗ್ರಾಹಕರಿಂದ ಪಾನ ಸಂಖ್ಯೆಯೊಂದಿಗೆ ಇತರೆ ಆದಾಯ ಮೂಲಗಳಿಂದ ಮಾಡುವ ಠೇವಣಿಗೆ ಫಾರಂ 15(ಜಿ) ಹಾಗೂ ಹಿರಿಯ ನಾಗರೀಕರಿಂದ 15(ಹೆಚ್) ಫಾರಂ ಕಡ್ಡಾಯವಾಗಿ ದ್ವಿಪ್ರತಿಗಳಲ್ಲಿ ಪಡೆದು ಇದರ ಎರಡು ಪ್ರತಿಗಳನ್ನು ಮುಂದಿನ ತಿಂಗಳ 5ನೇ ದಿನಾಂಕದೊಳಗಾಗಿ ಕೇಂದ್ರ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸುವುದು ಮತ್ತು ಇನ್ನೊಂದು ಪ್ರತಿಯನ್ನು ಶಾಖೆಯಲ್ಲಿ ಕಾಯ್ದಿರಿಸಬೇಕು.
  7. ಠೇವಣಿದಾರರು ಪಾನ ಕಾರ್ಡ(Pಂಓ ಅಂಖಆ)ಹೊಂದಿರದೇ ಇದ್ದಲ್ಲಿ ಫಾರಂ ನಂ.60ನ್ನು ಹಾಗೂ ಠೇವಣಿದಾರರ ಮೊತ್ತವು ಕೃಷಿ ಮೂಲದಿಂದ ಗಳಿಸಿದ ಆದಾಯವಿದ್ದಲ್ಲಿ ಫಾರಂ ನಂ 61ನ್ನು ಪಡೆಯುವುದು. ಠೇವಣಿದಾರರು ಪಾನ್ ಸಂಖ್ಯೆ ನೀಡದೇ ಇದ್ದಲ್ಲಿ ರೂ.10000/-ಕ್ಕೂ ಅಧಿಕ ಬಡ್ಡಿ ಪಡೆಯುವ ಸದಸ್ಯರಿಂದ ಶೇಕಡ 20ರಷ್ಟು ಟಿ.ಡಿ.ಎಸ್.ಕಡಿತ ಮಾಡಬೇಕು.
  8. ರೂ.20000/-ಕ್ಕೆ ಮೇಲ್ಪಟ್ಟು ಠೇವಣಿ ಮರುಪಾವತಿ ಮಾಡುವಾಗ ಸಂಬಂಧಿಸಿದ ಠೇವಣಿದಾರರ ಉಳಿತಾಯ/ಚಾಲ್ತಿ ಖಾತೆಗೆ ಜಮಾ ಮಾಡಿ ನಂತರ ಪಾವತಿಸುವುದು.
  9. ಭಾರತೀಯ ರಿಜರ್ವ ಬ್ಯಾಂಕ್ ನಿರ್ದೇಶನದಂತೆ ರೂ.50000/- ಮತ್ತು ಅಧಿಕ ಮೊತ್ತದ ಠೇವಣಿ ಪಡೆಯುವಾಗ ಠೇವಣಿದಾರರ ಉಳಿತಾಯ ಖಾತೆಗೆ ಹಣ ಜಮಾ ಮಾಡಿಕೊಂಡು ನಂತರ ವರ್ಗಾವಣೆ ಮುಖಾಂತರ ಠೇವಣಿ ಮಾಡಿಕೊಳ್ಳುವುದು. ಮತ್ತು ಠೇವಣಿ ಅರ್ಜಿಯಲ್ಲಿ ಠೇವಣಿದಾರರ ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಉಳಿತಾಯ ಖಾತೆ ಸಂಖ್ಯೆ, ವಾರಸುದಾರರ ಹೆಸರು, ಸಂಬಂಧ ಮತ್ತು ವಾರಸುದಾರರ ವಯಸ್ಸನ್ನು ಕಡ್ಡಾಯವಾಗಿ ಪಡೆಯುವುದು.
  10. ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಮಾಡುವ ಠೇವಣಿಗಳಿಗೆ ಕಡ್ಡಾಯವಾಗಿ ವಯಸ್ಸಿನ ಧೃಢೀಕರಣ ಪ್ರಮಾಣ ಪತ್ರ ಪಡೆಯುವುದು.

ಮೇಲ್ಕಂಡ ಎರಡು ಉತ್ತೇಜನ ಬಡ್ಡಿ ದರಗಳಲ್ಲಿ ಠೇವಣಿದಾರರಿಗೆ ಗರಿಷ್ಟ ಒಂದು ಉತ್ತೇಜನ ಬಡ್ಡಿ ದರವನ್ನು, ಪರಿಷ್ಕøತ ಬಡ್ಡಿ ದರದೊಂದಿಗೆ ಮಾತ್ರ ನೀಡುವುದು. ಒಂದಕ್ಕಿಂತ ಹೆಚ್ಚಿನ ಉತ್ತೇಜನ ಬಡ್ಡಿ ದರವನ್ನು ನೀಡುವಂತಿಲ್ಲ.
ಶಾಖಾ ವ್ಯವಸ್ಥಾಪಕರುಗಳು ಮೇಲೆ ತಿಳಿಸಿರುವ ಬಡ್ಡಿ ದರಗಳನ್ನು ದಿನಾಂಕ 05-12-2016 ರಿಂದ ಜಾರಿಗೊಳಿಸಲು ಸೂಚಿಸಲಾಗಿದೆ. ಈ ಪರಿಷ್ಕøತ ಬಡ್ಡಿ ದರವು ಹೊಸದಾಗಿ ಸ್ವೀಕರಿಸುವ ಠೇವಣಿಗಳಿಗೆ ಹಾಗೂ ನವೀಕರಿಸುವ ಠೇವಣಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಉಳಿತಾಯ ಠೇವಣಿಗಳಿಗೆ ಶೇ. 4.00 ಬಡ್ಡಿ ದರವನ್ನು ನೀಡುವುದು. ಚಾಲ್ತಿ ಖಾತೆಗೆ ಬಡ್ಡಿಯನ್ನು ನೀಡುವಂತಿಲ್ಲ.

ಮೇಲೆ ನಮೂಸಿದಿರುವ ಬಡ್ಡಿ ದರದ ವಿವರಗಳನ್ನು ಬ್ಯಾಂಕಿನ ಎಲ್ಲಾ ನೌಕರ ವರ್ಗದವರ ಮತ್ತು ಶಾಖೆಗಳ ಸೂಚನಾ ಫಲಕದಲ್ಲಿ ಪ್ರಕಟಿಸುವ ಮೂಲಕ ಬ್ಯಾಂಕಿನ ಎಲ್ಲಾ ಗ್ರಾಹಕರಿಗೂ ಹಾಗೂ ಸಾರ್ವಜನಿಕರ ಗಮನಕ್ಕೆ ತರುವುದು. ಹಾಗೂ ಸದರಿ ಬಡ್ಡಿ ದರಗಳನ್ನು ಜಾರಿಗೊಳಿಸಲು ಸೂಚಿಸಿದೆ.

- ಮುಖ್ಯ ಕಾರ್ಯನಿರ್ವಾಹಣಾಧಿಕಾರಿ