ಸಂದೇಶ

ಅಧ್ಯಕ್ಷರು,
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ.,
ದಾವಣಗೆರೆ.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದಿನಾಂಕ 07-12-2001 ರಂದು ನೋಂದಾವಣೆಯಾಗಿ ದಿನಾಂಕ 01-01-2002 ರಿಂದ ಕಾರ್ಯಪ್ರಾರಂಭಿಸಿ 17 ವರ್ಷಗಳಿಂದ ಜಿಲ್ಲೆಯ 190 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರ ಅಭಿವೃದ್ದಿಗಾಗಿ ಕೃಷಿ ಸಾಲ ನೀಡುತ್ತಾ ಬಂದಿದೆ. ಸಹಕಾರ ಸಂಘಗಳಿಗೆ ಮತ್ತು ಗ್ರಾಹಕರಿಗೆ ಬ್ಯಾಂಕಿನ 18 ಶಾಖೆಗಳ ಮೂಲಕ ಕೃಷಿಯೇತರ ಸಾಲಗಳನ್ನು ಸಹ ನೀಡುತ್ತಾ ಜಿಲ್ಲೆಯ ರೈತರ ಮತ್ತು ಜನತೆಯ ಆರ್ಥಿಕ ಅಭಿವೃದ್ಧಿಗೆ ನೆರವನ್ನು ನೀಡುತ್ತಿರುವುದು ಸಂತೋಷದ ವಿಷಯ.

2018-19ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು ರೂ.50.00 ಲಕ್ಷಗಳ ಲಾಭವನ್ನು ಗಳಿಸಿರುತ್ತದೆ. ಸರ್ಕಾರದ ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲವನ್ನು 2018-19ನೇ ಸಾಲಿಗೆ ಅಲ್ಪಾವಧಿ ಕೃಷಿ ಸಾಲ ರೂ.290.00 ಕೋಟಿಗಳು ಮತ್ತು ಮಧ್ಯಮಾವಧಿ ಕೃಷಿ ಸಾಲ ರೂ.10.00 ಕೋಟಿಗಳ ಸಾಲ ನೀಡುವ ಗುರಿ ಹೊಂದಿರುತ್ತದೆ. ಬ್ಯಾಂಕಿನ ಎಲ್ಲಾ ಶಾಖೆಗಳ ಮತ್ತು ಕೇಂದ್ರ ಕಛೇರಿಗಳ ವ್ಯವಹಾರಗಳನ್ನು ಕೋರ್ ಬ್ಯಾಂಕಿಂಗ್‍ಗೆ ಅಳವಡಿಸಲಾಗಿರುತ್ತದೆ. ನಮ್ಮ ಬ್ಯಾಂಕು RTGS, NEFT, Rupay Debit Cards (ATM) ಮತ್ತು DBT (ನೇರ ನಗದು ವರ್ಗಾವಣೆ ವ್ಯವಹಾರಗಳಾದ ಗ್ಯಾಸ್ ಸಬ್ಸಡಿ, ಗೊಬ್ಬರ ಸಬ್ಸಡಿ, ವಿಧ್ಯಾರ್ಥಿ ವೇತನ ಮತ್ತು ಸರ್ಕಾರದ ಇತರೆ ಸಹಾಯಧನಗಳು) ವ್ಯವಹಾರವನ್ನು ಪ್ರಾರಂಭಿಸಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆಯಲೆಂದು ಆಶಿಸುತ್ತೇನೆ.

ನಮ್ಮ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆ.ಸಿ.ಸಿ.ಸಾಲ ಪಡೆದ ರೈತರಿಗೆ “ರೂಪೇ ಕೆ.ಸಿ.ಸಿ.ಕಾರ್ಡ” ಮತ್ತು ಗ್ರಾಹಕರಿಗೆ “ಡೆಬಿಟ್ ಕಾರ್ಡ್”ಗಳನ್ನು ನೀಡಿದ್ದು, ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಬಯಸುತ್ತೇನೆ. ಗ್ರಾಹಕರಿಗೆ ಅವರ ಖಾತೆಯಲ್ಲಿ ಬ್ಯಾಂಕಿನ ವ್ಯವಹಾರದ ಮಾಹಿತಿಯನ್ನು ತಕ್ಷಣವೇ ತಿಳಿಸುವ ಸಂಬಂಧ SMS ALERT ಸೇವೆಯನ್ನು ಸಹ ಪ್ರಾರಂಭಸಿರುತ್ತದೆ.

ನೈಸರ್ಗಿಕ ವಿಕೋಪಗಳಿಂದ ರೈತ ಸದಸ್ಯರುಗಳಿಗೆ ಬೆಳೆ ಹಾನಿ ತಪ್ಪಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳನ್ನು ಜಾರಿಗೊಳಿಸಲಾಗಿರುತ್ತದೆ. ಭಾರತ ಸರ್ಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳಾದ PMSBY/ PMJJBY ಮತ್ತು APY ಗಳನ್ನು ನಮ್ಮ ಬ್ಯಾಂಕಿನಲ್ಲಿಯೂ ಸಹ ಅನುಷ್ಠಾನಗೊಳಿಸಲಾಗಿದೆ. 2019-2020ನೇ ಸಾಲಿಗೆ ಬ್ಯಾಂಕು ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡಲು IMPS ಮತ್ತು ECS ಸೌಲಭ್ಯವನ್ನು ಅತಿ ಶೀಘ್ರದಲ್ಲಿ ಪ್ರಾರಂಬಿಸಲಾಗುವುದು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿ ಜಿಲ್ಲೆಯ ಜನತೆಗೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡಲಿ ಎಂದು ಬ್ಯಾಂಕಿನ ಅಭಿವೃದ್ದಿಗೆ ತಮ್ಮಗಳ ಸಹಕಾರ ಯಾವಾಗಲು ಇರಲಿ ಎಂದು ಶುಭ ಹಾರೈಸುತ್ತೇನೆ.

ಅಧ್ಯಕ್ಷರು